ಅಮೃತಧಾರೆ ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಈ ಧಾರಾವಾಹಿಯು 2023ರ ಮೇ 29 ರಂದು ಝೀ ಕನ್ನಡದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.00 ಗಂಟೆಗೆ ಪ್ರಸಾರವಾಗುತ್ತಿದೆ . ಈ ಧಾರಾವಾಹಿಯು ಹಿಂದಿ ಭಾಷೆಯ ಬಡೇ ಅಚ್ಚೆ ಲಗ್ತೆ ಹೇ ಯ ಅಧಿಕೃತ ರೀಮೆಕ್ ಆಗಿದೆ. ಈ ಕಾರ್ಯಕ್ರಮದಲ್ಲಿ ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. == ಕಥಾವಸ್ತು == ಧಾರಾವಾಹಿಯು ಇಬ್ಬರು ಅವಿವಾಹಿತರ ಸುತ್ತ ಸುತ್ತುತ್ತದೆ. ವಯಸ್ಸು ನಲ್ವತ್ತೈದು ಆಗಿರುವ ಉದ್ಯಮಿ ಗೌತಮ್ ಮತ್ತು ವಯಸ್ಸು ಮೂವತ್ತೈದರಲ್ಲಿರುವ ಸಾಮಾನ್ಯ ಮಧ್ಯಮ ವರ್ಗದ ಉಪನ್ಯಾಸಕಿ ಭೂಮಿಕಾಳನ್ನು ಮದುವೆಯಾಗುವ ಸಂದರ್ಭ ಬರುತ್ತದೆ. == ಪಾತ್ರವರ್ಗ == === ಮುಖ್ಯ ಪಾತ್ರದಲ್ಲಿ === ಛಾಯ ಸಿಂಗ್ : ಭೂಮಿಕಾ ಪಾತ್ರದಲ್ಲಿ, ಧಾರಾವಾಹಿ ನಾಯಕಿಯಾಗಿ. ರಾಜೇಶ್ ನಟರಂಗ್ : ಗೌತಮ್ ದಿವಾನ್ ಪಾತ್ರದಲ್ಲಿ, ಧಾರಾವಾಹಿ ನಾಯಕನಾಗಿ. === ಇತರೆ === ವನಿತಾ ವಾಸು : ಶಕುಂತಳಾ ಪಾತ್ರದಲ್ಲಿ, ಗೌತಮ್ ಮಲತಾಯಿಯಾಗಿ. ಸಿಹಿ ಕಹಿ ಚಂದ್ರು: ಸದಾಶಿವನ ಪಾತ್ರದಲ್ಲಿ, ಭೂಮಿಕಾ ಮತ್ತು ಜೀವನ್ ತಂದೆಯಾಗಿ. ಚೈತ್ರ ಶೆಣೈ: ಮಂದಾಕಿಣಿ ಪಾತ್ರದಲ್ಲಿ. ಸದಾಶಿವನ ಹೆಂಡತಿಯಾಗಿ. ಭೂಮಿಕಾ ಮತ್ತು ಜೀವನ್ ತಾಯಿಯಾಗಿ. ಅಮೃತ ನಾಯಕ್ : ಅಪೇಕ್ಷಾ ಪಾತ್ರದಲ್ಲಿ, ಭೂಮಿಕಾ ತಂಗಿಯಾಗಿ. ಸಾರಾ ಅಣ್ಣಯ್ಯ: ಮಹಿಮಾ ಪಾತ್ರದಲ್ಲಿ, ಗೌತಮ್ ತಂಗಿಯಾಗಿ. ಶಕುಂತಳಾ ಮಗಳಾಗಿ, ಜೀವನ್ ಹೆಂಡತಿಯಾಗಿ. ಶಶಿ ಹೆಗ್ಗಡೆ : ಜೀವನ್ ಪಾತ್ರದಲ್ಲಿ, ಭೂಮಿಕಾ ತಮ್ಮನಾಗಿ. ಮಂದಾಕಿನಿ ಮತ್ತು ಸದಾಶಿವನ ಮಗನಾಗಿ, ಮಹಿಮಾ ಗಂಡನಾಗಿ. ರಣವ್: ಜೈದೇವ್ ಪಾತ್ರದಲ್ಲಿ, ಚಂದನ್: ಅಶ್ವಿನಿ ಪಾತ್ರದಲ್ಲಿ, ಸ್ವಾತಿ: ಅಪರ್ಣ ಪಾತ್ರದಲ್ಲಿ, ಆನಂದ ಹೆಂಡತಿಯಾಗಿ. ಆನಂದ್ : ಆನಂದ್ ಪಾತ್ರದಲ್ಲಿ, ಗೌತಮ್ ಸ್ನೇಹಿತನಾಗಿ. ಅಪರ್ಣ ಗಂಡನಾಗಿ. == ಸಂಗೀತ == ಅಮೃತಧಾರೆಯಲ್ಲಿನ ಹಾಡುಗಳು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಧಾರವಾಹಿಯಲ್ಲಿ ಜನಪ್ರಿಯ ಹಾಡುಗಳ ಗುಚ್ಚಗಳು ಈ () ಕೆಳಗಿನಂತಿದೆ. == ರೂಪಾಂತರಗಳು == == ಬಾಹ್ಯಕೊಂಡಿಗಳು == ಅಮೃತಧಾರೆ @ ಝೀ5 ಯಲ್ಲಿ ವೀಕ್ಷಣೆ ಮಾಡಿ == ಉಲ್ಲೇಖಗಳು ==